ಕಪ್ಪು ಚುಕ್ಕೆ ಇಲ್ಲದೆ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಎಎಸ್‌ಐ ಸೋಮಣ್ಣ ಅವರಿಗೆ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಇಂದ ಸನ್ಮಾನ

ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಶಿವಕುಮಾರ್ ಹೂಟಗಳ್ಳಿ ಅವರ ನೇತೃತ್ವದಲ್ಲಿ ಸಂಸ್ಥೆಯ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಈ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸೋಮಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಲಾಯಿತು.
15 ವರ್ಷ ಒಟ್ಟಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಹೆಡ್ ಕಾನ್ಸ್ಟೇಬಲ್
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸ್ಥೆಯ ಸ್ವಯಂ ಸೇವಾದಳದ ಎಚ್.ಆರ್. ಗಣೇಶ್ (ಹೆಡ್ ಕಾನ್ಸ್ಟೇಬಲ್, ಪೊಲೀಸ್ ಇಲಾಖೆ), "ಸೋಮಣ್ಣ ಅವರ ಜೊತೆ ನಾನು 15 ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದೇನೆ. ಕರ್ತವ್ಯದ ಜೊತೆಗೆ ಅವರಲ್ಲಿದ್ದ ಮಾನವೀಯತೆ, ಕರುಣೆ ಹಾಗೂ ಸರಳತೆಯ ಗುಣಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ" ಎಂದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.
ಇಂತಹ ಮಹನೀಯರು ನಮ್ಮ ಸಂಸ್ಥೆಯ ಶಕ್ತಿ
ವಕೀಲರಾದ ಮೊನಾಲಿಸಾ ಪಟ್ಟಡ
ಸಂಸ್ಥೆಯ ಕಾನೂನು ಘಟಕದ ಮುಖ್ಯಸ್ಥರಾದ ಮೊನಾಲಿಸಾ ಪಟ್ಟಡ (ವಕೀಲರು) ಮಾತನಾಡಿ, "ಸಮಾಜದಲ್ಲಿ ಇಂತಹ ಉನ್ನತ ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳು ನಮ್ಮ ಸಂಸ್ಥೆಯೊಂದಿಗೆ ಸದಾ ಇರುವುದು ನಮಗೆ ದೊಡ್ಡ ಶಕ್ತಿ. ಸಮಾಜಮುಖಿ ಕೆಲಸಗಳನ್ನು ಮಾಡುವ ಇಂತಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯು ನಿರಂತರವಾಗಿ ಹಮ್ಮಿಕೊಳ್ಳಲಿದೆ" ಎಂದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ಕೈಜೋಡಿಸಿರುವುದು ಹೆಮ್ಮೆಯ ವಿಷಯ ಶಿವಕುಮಾರ್ ಹೂಟಗಳ್ಳಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ, "ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರೀತಿ, ವಿಶ್ವಾಸ, ಕರುಣೆ ಹಾಗೂ ಸೌಹಾರ್ದತೆಯ ಆಧಾರದ ಮೇಲೆ ಉತ್ತಮ ಗುಣಮಟ್ಟದ ವ್ಯಕ್ತಿಗಳು ನಮ್ಮ ಸಂಸ್ಥೆಯ ಜೊತೆ ಕೈಜೋಡಿಸಿರುವುದು ನಮ್ಮ ಟ್ರಸ್ಟ್‌ಗೆ ಸಂದ ಗೌರವ. ಸಮಾಜದ ಒಳ್ಳೆಯ ಸೇವಕರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಮ್ಮ ಸಂಸ್ಥೆ ಮುಂಬರುವ ದಿನಗಳಲ್ಲೂ ಮುಂದುವರಿಸಲಿದೆ" ಎಂದು ಹೇಳಿದರು.
ಈ ಶುಭ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಿದಸಂಸ್ಥೆಯ ಖಜಾಂಚಿ ಹಾಗೂ ಕೊಡಗು ಉಸ್ತುವಾರಿ ಸೌಮ್ಯ ಶ್ರೀ (ಏಳನೇ ಹೊಸಕೋಟೆ) ಮಾತನಾಡಿ ನಮ್ಮ ಸಂಸ್ಥೆ ಜಾತಿ ಮತ ಭೇದವಿಲ್ಲದೆ ಯಾಲ್ಲ ವರ್ಗಗಳನ್ನು ಗುರುತಿಸುವ ಕೆಲಸ ಮಾಡುತ್ತೇವೆ ಎಂದರು. ವಿನಯ್ ಠಾಕೂರ್, ಸತಂದರ್, ಸರೊಜ್ ಸೇರಿದಂತೆ ಸಂಸ್ಥೆಯ ಹಲವಾರು ಸ್ವಯಂಸೇವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
(ಮಾನವೀಯತೆ ಚಾರಿಟೇಬಲ್ ಟ್ರಸ್ಟ್ (ರಿ.)